Sunday, 22 May 2016

Mahaganapate Maatamgavadana Lyrics In Kannada.

Mahaganapate Maatamgavadana Lyrics In Kannada.
ಮಹಗಣಪತೆ ಮಾತಂಗವದನ ಮೂಷಿಕವಾಹನ ಮಂಗಳಚರಣ













ಮಹಾಗಣಪತೇ ಮಾತಂಗವದನ
ಮೂಷಿಕವಾಹನ ಮಂಗಳಚರಣ ||ಪ।।
ವಿನಾಯಕ ನೀ ವಿಘ್ನಕೋಟಿ ಹರಣ
ವಾಮನರೂಪ ವಲ್ಲಭನೇ
ಷಣ್ಮುಖಸೋದರ ಸುರಮುನಿಪೂಜಿತ
ಶರಣೆಂಬೆ ನಿನಗೆ ಶಂಭುಕುಮಾರ ||೧||
ಲಂಬೋದರನೇ ಲಕುಮೀಕರನೇ
ಅಂಬಾಸುತನೇ ಆದಿಪೂಜ್ಯನೇ
ದಶಭುಜರೂಪನೆ ದೂರ್ವಾಪ್ರಿಯನೆ
ದುರಿತನಿವಾರಣ ದೀನರಕ್ಷಣ ||೨||
ಪಾಶಾಂಕುಶಧರ ಪಾಪವಿಮೋಚನ
ಪಾವನಸ್ಮರಣ ಪತಿತಪಾವನ
ಜಗದೊಳು ನಿನ್ನಯ ನಾಮವ ಪೊಗಳುವೆ
ಜಯರಾಮ ವಿಠ್ಠಲಗೆ ನೀ ಅತಿಪ್ರಿಯನೆ ||೩||
ಮಹಾಗಣಪತೇ ಮಾತಂಗವದನ
ಮೂಷಿಕವಾಹನ ಮಂಗಳಚರಣ. 
ವೀಡಿಯೊ ಸಾಂಗಗಾಗಿ ಕ್ಲಿಕ್ ಮಾಡಿ :

No comments:

Post a Comment